top of page

Can E20 Fuel Lead to Insurance Claim Disputes?

  • Writer: Rolling Right Services
    Rolling Right Services
  • 4 hours ago
  • 2 min read

India’s shift to E20 fuel has created confusion among owners of older petrol vehicles regarding insurance coverage and claim eligibility. The concern started after an ICICI Lombard blog suggested that damage caused by using E20 fuel in vehicles not designed for it could potentially be viewed as negligence.


However, ICICI Lombard later clarified that:

  • Simply using E20 fuel does not automatically void insurance coverage.

  • Claims are not rejected solely because E20 fuel was used.

  • Insurers will examine the cause of damage on a case-by-case basis.


Where the Real Issue Lies

For older vehicles that were not designed for E20 fuel:

  • Long-term ethanol-related wear on fuel lines, seals, gaskets, and other components may be treated as wear and tear, which is generally excluded from standard motor insurance policies.

  • If an insurer determines that the damage occurred because the owner knowingly used fuel beyond the manufacturer’s specifications, claim disputes could arise.


So far, there is no conclusive real-world evidence that E20 fuel causes significant damage to engine components. If ethanol-blended fuel contributes to additional wear of engine or fuel system components over time, it would generally be classified as normal wear and tear, which is not covered under standard motor insurance policies anyway. As with any fuel, the best approach is to follow the manufacturer’s recommendations for your vehicle. There is no need for vehicle owners to panic.



E20 ಇಂಧನದಿಂದ ವಿಮಾ ಕ್ಲೈಮ್ ವಿವಾದಗಳು ಉಂಟಾಗಬಹುದೇ?

ಭಾರತದಲ್ಲಿ E20 ಇಂಧನದ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ, ಹಳೆಯ ಪೆಟ್ರೋಲ್ ವಾಹನಗಳ ಮಾಲೀಕರಲ್ಲಿ ವಿಮಾ ರಕ್ಷಣೆ ಮತ್ತು ಕ್ಲೈಮ್ ಅರ್ಹತೆ ಕುರಿತು ಗೊಂದಲ ಉಂಟಾಗಿದೆ. E20ಗೆ ಹೊಂದಿಕೆಯಾಗದ ವಾಹನಗಳಲ್ಲಿ ಈ ಇಂಧನವನ್ನು ಬಳಸುವುದರಿಂದ ಉಂಟಾಗುವ ಹಾನಿಯನ್ನು ನಿರ್ಲಕ್ಷ್ಯವೆಂದು ಪರಿಗಣಿಸಬಹುದು ಎಂಬ ಸೂಚನೆಯನ್ನು ICICI Lombard ಬ್ಲಾಗ್ ನೀಡಿದ ಬಳಿಕ ಈ ಚರ್ಚೆ ಆರಂಭವಾಯಿತು.


ಆದರೆ ನಂತರ ICICI Lombard ಸ್ಪಷ್ಟನೆ ನೀಡಿದ್ದು:

  • ಕೇವಲ E20 ಇಂಧನ ಬಳಸಿದ ಕಾರಣಕ್ಕೆ ವಿಮಾ ರಕ್ಷಣೆ ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ.

  • E20 ಇಂಧನ ಬಳಸಲಾಗಿದೆ ಎಂಬ ಕಾರಣಕ್ಕೇ ವಿಮಾ ಕ್ಲೈಮ್ ತಿರಸ್ಕರಿಸಲಾಗುವುದಿಲ್ಲ.

  • ಹಾನಿಯ ನಿಜವಾದ ಕಾರಣವನ್ನು ಪ್ರತಿ ಪ್ರಕರಣದ ಆಧಾರದ ಮೇಲೆ ವಿಮಾ ಕಂಪನಿಗಳು ಪರಿಶೀಲಿಸುತ್ತವೆ.


ನಿಜವಾದ ವಿಷಯ ಎಲ್ಲಿದೆ?

E20ಗೆ ವಿನ್ಯಾಸಗೊಳಿಸದ ಹಳೆಯ ವಾಹನಗಳಲ್ಲಿ:

  • ಇಥನಾಲ್‌ನ ದೀರ್ಘಕಾಲಿಕ ಪರಿಣಾಮದಿಂದ ಫ್ಯುಯೆಲ್ ಲೈನ್‌ಗಳು, ಸೀಲ್‌ಗಳು, ಗ್ಯಾಸ್ಕೆಟ್‌ಗಳು ಮತ್ತು ಇತರೆ ಭಾಗಗಳಲ್ಲಿ ಉಂಟಾಗುವ ಸವೆತವನ್ನು ಸಾಮಾನ್ಯ “ವೇರ್ ಅಂಡ್ ಟೇರ್” ಎಂದು ಪರಿಗಣಿಸಬಹುದು. ಇಂತಹ ಸವೆತಕ್ಕೆ ಸಾಮಾನ್ಯ ಮೋಟಾರ್ ವಿಮಾ ಪಾಲಿಸಿಗಳಲ್ಲಿ ರಕ್ಷಣೆ ಇರುವುದಿಲ್ಲ.

  • ತಯಾರಕರ ಶಿಫಾರಸಿಗಿಂತ ಹೆಚ್ಚಿನ ಇಥನಾಲ್ ಮಿಶ್ರಣದ ಇಂಧನವನ್ನು ವಾಹನ ಮಾಲೀಕರು ತಿಳಿದಿದ್ದರೂ ಬಳಸಿದ್ದಾರೆ ಎಂದು ವಿಮಾ ಕಂಪನಿ ನಿರ್ಧರಿಸಿದರೆ, ಕ್ಲೈಮ್ ಸಂಬಂಧಿತ ವಿವಾದಗಳು ಉಂಟಾಗುವ ಸಾಧ್ಯತೆ ಇದೆ.


E20 ಇಂಧನವು ಎಂಜಿನ್ ಭಾಗಗಳಿಗೆ ಗಂಭೀರ ಹಾನಿ ಉಂಟುಮಾಡುತ್ತದೆ ಎಂಬುದಕ್ಕೆ ಇದುವರೆಗೆ ಸ್ಪಷ್ಟವಾದ ವಾಸ್ತವಿಕ ಸಾಕ್ಷ್ಯಗಳು ಲಭ್ಯವಾಗಿಲ್ಲ. ಇಥನಾಲ್ ಮಿಶ್ರಿತ ಇಂಧನದ ಬಳಕೆಯಿಂದ ಎಂಜಿನ್ ಅಥವಾ ಫ್ಯುಯೆಲ್ ಸಿಸ್ಟಮ್ ಭಾಗಗಳಲ್ಲಿ ಹೆಚ್ಚುವರಿ ಸವೆತ ಉಂಟಾದರೂ, ಅದನ್ನು ಸಾಮಾನ್ಯ ವೇರ್ ಅಂಡ್ ಟೇರ್ ಎಂದು ಪರಿಗಣಿಸಲಾಗುತ್ತದೆ. ಇಂತಹ ಸವೆತಕ್ಕೆ ಸಾಮಾನ್ಯ ಮೋಟಾರ್ ವಿಮೆ ರಕ್ಷಣೆ ನೀಡುವುದಿಲ್ಲ. ಯಾವುದೇ ಇಂಧನದಂತೆ, ನಿಮ್ಮ ವಾಹನದ ತಯಾರಕರು ನೀಡಿರುವ ಶಿಫಾರಸುಗಳನ್ನು ಅನುಸರಿಸುವುದೇ ಉತ್ತಮ ಮಾರ್ಗ. ವಾಹನ ಮಾಲೀಕರು ಆತಂಕಪಡಬೇಕಾದ ಅಗತ್ಯವಿಲ್ಲ.

Comments


Come visit us!

AND DRIVE AWAY WITH A TRUST!

NH66, Outdoor Grand Bay, Kallapu, Mangalore, Karnataka 575017

8970000598
8970000796
8970000976

  • Grey Facebook Icon
  • Instagram

© 2021 by Rolling Right Services.

bottom of page